
ಅತ್ತೂರು ಜಾತ್ರೆ, ಉಡುಪಿ
ಕಾರ್ಕಳದ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೆಸಿಲಿಕಾದಲ್ಲಿ ಪ್ರತಿವರ್ಷ ಆಚರಿಸಲಾಗುವ ಅತ್ತೂರು ಜಾತ್ರೆ ನಡೆಯುವ ಪ್ರಮುಖ ಧಾರ್ಮಿಕ ಉತ್ಸವ. ನೊವೆನಾ ಪ್ರಾರ್ಥನೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಹಬ್ಬದೂಟವನ್ನು ಒಳಗೊಂಡ ಈ ಸಾಂಪ್ರದಾಯಿಕ ಉತ್ಸವಕ್ಕೆ ದೂರದೂರುಗಳಿಂದ ಭಕ್ತರು ಆಗಮಿಸಿ, ಮೇಣದಬತ್ತಿ ಬೆಳಗುವುದು ಮತ್ತು ಕಾಣಿಕೆ ಸಲ್ಲಿಸುವಂತಹ ವಿಧಿಗಳ ಮೂಲಕ ಸಂತ ಲಾರೆನ್ಸರನ್ನು ಗೌರವಿಸಿ ಆಶೀರ್ವಾದ ಪಡೆಯುತ್ತಾರೆ.
ಅತ್ತೂರು ಹಬ್ಬ ಅಥವಾ ಅತ್ತೂರು ಜಾತ್ರೆ ಕರ್ನಾಟಕದ ಕಾರ್ಕಳದಲ್ಲಿರುವ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೆಸಿಲಿಕಾದಲ್ಲಿ ನಡೆಯುವ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ. 1759ರಲ್ಲಿ ನಿರ್ಮಿಸಲಾದ ಈ ಪೂಜ್ಯ ರೋಮನ್ ಕ್ಯಾಥೊಲಿಕ್ ಚರ್ಚ್ ತನ್ನ ಪವಾಡ ಕಥೆಗಳು ಮತ್ತು ಆಳವಾದ ಆಧ್ಯಾತ್ಮಿಕ ಮಹತ್ವಕ್ಕೆ ಹೆಸರಾಗಿದೆ. ಈ ಹಬ್ಬ ಚರ್ಚ್ನ ಪಾಲಕ ಸಂತರಾದ ಸಂತ ಲಾರೆನ್ಸರನ್ನು ಗೌರವಿಸುತ್ತದೆ; ನೊವೆನಾ ಪ್ರಾರ್ಥನೆಗಳು, ಭವ್ಯ ಹಬ್ಬದೂಟ ಮತ್ತು ವಿವಿಧ ಭಕ್ತಿ ವಿಧಿಗಳು ಇದರ ವಿಶೇಷತೆ.
ಐತಿಹಾಸಿಕ ಹಿನ್ನೆಲೆ ಮತ್ತು ಪರಂಪರೆ:
ಟಿಪ್ಪು ಸುಲ್ತಾನನ ಸೆರೆಯಿಂದ ಮರಳಿದ ಕ್ರೈಸ್ತರು ಭೂಮಿ ಮತ್ತು ಮನೆಯಿಲ್ಲದೆ ಉಳಿದಿದ್ದ ಸೆರೆಯ ನಂತರದ ಕಾಲಘಟ್ಟದಲ್ಲಿ ಅತ್ತೂರು ಜಾತ್ರೆಯ ಮೂಲವಿದೆ. ಸಂತ ಲಾರೆನ್ಸರ ಭಕ್ತರಾದ ಅವರು ವಾರ್ಷಿಕ ಹಬ್ಬ ಆಚರಿಸಲು ಆರಂಭಿಸಿದರು; ಈ ಪರಂಪರೆ ಇಂದಿಗೂ ಮುಂದುವರಿದಿದೆ. ಸ್ಥಳೀಯರು ಮತ್ತು ದೂರದ ಭಕ್ತರಿಬ್ಬರೂ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಂತೆ ಈ ಉತ್ಸವವನ್ನು ರೂಪಿಸಲಾಗಿದ್ದು, ಹಬ್ಬದ ಪವಿತ್ರ ವಿಧಿಗಳಲ್ಲಿ ಅಪಾರ ಜನಸ್ತೋಮ ಪಾಲ್ಗೊಳ್ಳುತ್ತದೆ.
ಹಬ್ಬದ ಮಹತ್ವ:
ಅತ್ತೂರು ಜಾತ್ರೆ ಕೇವಲ ಧಾರ್ಮಿಕ ಉತ್ಸವವಲ್ಲ, ಸಮುದಾಯದ ಸಂಭ್ರಮವೂ ಹೌದು. ಪ್ರಮುಖ ವಿಧಿಗಳು ಇಂತಿವೆ:
- ನೊವೆನಾ ಪ್ರಾರ್ಥನೆಗಳು: ಮುಖ್ಯ ಹಬ್ಬದ ದಿನಗಳಿಗೆ ಮುನ್ನ ನಡೆಯುವ ಭಕ್ತಿ ಪ್ರಾರ್ಥನೆಗಳು.
- ಮೇಣದಬತ್ತಿ ಬೆಳಗುವುದು: ಭಕ್ತರು ಮೇಣದಬತ್ತಿ ಬೆಳಗಿ ಹರಕೆ ಹೊರುವ ಮತ್ತು ಹರಕೆ ತೀರಿಸುವ ವಿಶೇಷ ಸಂಪ್ರದಾಯ. ಹಬ್ಬದ ವೇಳೆ ಮೇಣದಬತ್ತಿ ಬೆಳಗಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿದೆ.
- ಪವಿತ್ರ ವಿಧಿಗಳು ಮತ್ತು ಆರಾಧನಾ ಆಚರಣೆಗಳು: ಬಲಿಪೂಜೆ, ಕಾಣಿಕೆಗಳು ಮತ್ತು ಭಕ್ತರು ಹೊತ್ತ ಹರಕೆಗಳನ್ನು ತೀರಿಸುವುದು ಈ ವಿಧಿಗಳಲ್ಲಿ ಸೇರಿವೆ.
ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಶೇಷತೆಗಳು:
- ಭಕ್ತಿಯ ಕಾಣಿಕೆಗಳು: ಭಕ್ತರು ಸಂತ ಲಾರೆನ್ಸರಿಗೆ ಕಾಣಿಕೆ ಸಲ್ಲಿಸುತ್ತಾರೆ; ಪುಣ್ಯಕ್ಷೇತ್ರದಲ್ಲಿ ಮೇಣದಬತ್ತಿ ಬೆಳಗುವುದು ನಂಬಿಕೆ ಮತ್ತು ಭಕ್ತಿಯ ಸಂಕೇತ.
- ಸಂಭ್ರಮದ ಆಚರಣೆಗಳು: ಸ್ಥಳೀಯ ಸಾಂಸ್ಕೃತಿಕ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ ಮತ್ತು ಸಮುದಾಯ ಕೂಟಗಳಿಂದ ಹಬ್ಬ ಕಳೆಗಟ್ಟುತ್ತದೆ.
- ಹಬ್ಬದೂಟ ಮತ್ತು ಸಮುದಾಯ: ಭವ್ಯ ಹಬ್ಬದೂಟದೊಂದಿಗೆ ಉತ್ಸವ ಸಮಾರೋಪಗೊಳ್ಳುತ್ತದೆ; ವಿವಿಧ ಧರ್ಮಗಳ ಜನರು ಸಂತ ಲಾರೆನ್ಸರ ಮೇಲಿನ ಭಕ್ತಿಯಲ್ಲಿ ಒಂದಾಗುತ್ತಾರೆ.
ಏಕೆ ಭಾಗವಹಿಸಬೇಕು?
ಅತ್ತೂರು ಜಾತ್ರೆಯಲ್ಲಿ ಭಾಗವಹಿಸುವುದು ಆಧ್ಯಾತ್ಮಿಕತೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ವಿಶಿಷ್ಟ ಸಂಗಮವನ್ನು ಅನುಭವಿಸುವ ಅವಕಾಶ. ಯಾತ್ರಿಕರು ಮತ್ತು ಪ್ರವಾಸಿಗರು ಸಂತ ಲಾರೆನ್ಸರಿಗೆ ನಮನ ಸಲ್ಲಿಸಲು, ಅರ್ಥಪೂರ್ಣ ವಿಧಿಗಳಲ್ಲಿ ಪಾಲ್ಗೊಳ್ಳಲು ಮತ್ತು ಶತಮಾನಗಳಿಂದ ಆಚರಿಸಲಾಗುತ್ತಿರುವ ಆಳವಾಗಿ ಬೇರೂರಿದ ಪರಂಪರೆಯ ಭಾಗವಾಗಲು ಈ ಉತ್ಸವ ಅವಕಾಶ ಕಲ್ಪಿಸುತ್ತದೆ.
ಕಾರ್ಕಳದ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೆಸಿಲಿಕಾಗೆ ಆಗಮಿಸಿ ಪವಿತ್ರ ಅತ್ತೂರು ಜಾತ್ರೆಯ ಭಾಗವಾಗಿ!