ಪರಂಪರೆ ಮತ್ತು ದೇವಾಲಯಗಳು

ಹಸ್ತಶಿಲ್ಪ ಪರಂಪರೆ ಗ್ರಾಮ, ಮಣಿಪಾಲ

ಪುರಾತನ ಸಂಪ್ರದಾಯ ಮತ್ತು ವಾಸ್ತುಶಿಲ್ಪದ ಸಂರಕ್ಷಣೆ

  • ಹಸ್ತಶಿಲ್ಪ ಪರಂಪರೆ ಗ್ರಾಮ, ಮಣಿಪಾಲ
  • ಹಸ್ತಶಿಲ್ಪ ಪರಂಪರೆ ಗ್ರಾಮ, ಮಣಿಪಾಲ
  • ಹಸ್ತಶಿಲ್ಪ ಪರಂಪರೆ ಗ್ರಾಮ, ಮಣಿಪಾಲ

ಪುರಾತನ ಸಂಪ್ರದಾಯ ಮತ್ತು ವಾಸ್ತುಶಿಲ್ಪದ ಸಂರಕ್ಷಣೆ

ಉಡುಪಿಯಿಂದ ಕೇವಲ 5.6 ಕಿ.ಮೀ ಮತ್ತು ಮಣಿಪಾಲದಿಂದ 1.4 ಕಿ.ಮೀ ದೂರದಲ್ಲಿರುವ ಹಸ್ತಶಿಲ್ಪ ಪರಂಪರೆ ಗ್ರಾಮ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಸಂರಕ್ಷಿಸಿ ಪ್ರದರ್ಶಿಸಲು ಮೀಸಲಾದ ಗಮನಾರ್ಹ ಬಯಲು ವಸ್ತುಸಂಗ್ರಹಾಲಯ. ಹಸ್ತಶಿಲ್ಪ ಟ್ರಸ್ಟ್ ಸ್ಥಾಪಿಸಿ ನಿರ್ವಹಿಸುತ್ತಿರುವ ಈ ಪರಂಪರೆ ಗ್ರಾಮ ಭಾರತದ ವೈವಿಧ್ಯಮಯ ಸಂಪ್ರದಾಯಗಳು, ಕರಕುಶಲತೆ ಮತ್ತು ಐತಿಹಾಸಿಕ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿ ನಿಂತಿದೆ.

ದೂರದೃಷ್ಟಿಯ ಪ್ರಯತ್ನ

ಈ ಗ್ರಾಮವು ಭಾರತದ ವಾಸ್ತುಶಿಲ್ಪ ಪರಂಪರೆಯನ್ನು ರಕ್ಷಿಸುವ ಧ್ಯೇಯ ಕೈಗೊಂಡ ದೂರದೃಷ್ಟಿಯ ವಿಜಯನಾಥ ಶೆಣೈ ಅವರ ಕನಸಿನ ಕೂಸು. ದಶಕಗಳ ಕಾಲ ಶೆಣೈ ಅವರು ಭಾರತದ ವಿವಿಧ ರಾಜ್ಯಗಳ 17 ಪೂರ್ವಜರ ಮನೆಗಳು ಮತ್ತು ಪರಂಪರೆಯ ರಚನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಸ್ಥಳಾಂತರಿಸಿ ಪುನರುಜ್ಜೀವನಗೊಳಿಸಿದರು. ಈ ಪುನರುಜ್ಜೀವನಗಳು ಕಳೆದುಹೋದ ಯುಗ ಹಾಗೂ ಭಾರತೀಯ ಸಮುದಾಯಗಳ ವಿಶಿಷ್ಟ ಜೀವನಶೈಲಿ, ಆಚರಣೆಗಳು ಮತ್ತು ನಂಬಿಕೆಗಳ ಪರಿಚಯ ಮಾಡಿಕೊಡುತ್ತವೆ.

ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಮುಖ್ಯಾಂಶಗಳು

ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ಗ್ರಾಮದಲ್ಲಿ ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲಾದ 18 ಪರಂಪರೆ ಕಟ್ಟಡಗಳಿವೆ, ಅವುಗಳಲ್ಲಿ ಕೆಲವು:

  • 13ನೇ ಶತಮಾನದ ಹರಿಹರ ಮಂದಿರ: ಪುರಾತನ ಕುಶಲಕಲೆಗೆ ಉತ್ತಮ ಉದಾಹರಣೆಯಾದ ದೇಗುಲ.
  • ಸಾಂಪ್ರದಾಯಿಕ ಮನೆಗಳು: ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಕರ್ನಾಟಕದ ನಿವಾಸಗಳು ಇವುಗಳಲ್ಲಿ ಸೇರಿದ್ದು, ದೇಸೀ ವಾಸ್ತುಶಿಲ್ಪದ ವೈವಿಧ್ಯವನ್ನು ಎತ್ತಿ ತೋರಿಸುತ್ತವೆ.
  • ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳು: ಬಸ್ತರ್-ಛತ್ತೀಸ್‌ಗಢದ ಅಪರೂಪದ ಬುಡಕಟ್ಟು ಕಲೆ, ದಕ್ಷಿಣ ಕನ್ನಡದ ಸುಂದರ ಜಾನಪದ ದೈವಗಳು, ಜವಳಿ, ಪೀಠೋಪಕರಣಗಳು ಮತ್ತು ಪುರಾತನ ಉಪಕರಣಗಳನ್ನು ಪ್ರದರ್ಶಿಸಲಾಗಿದ್ದು, ಭಾರತದ ಭೌತಿಕ ಸಂಸ್ಕೃತಿಯ ಕಿಟಕಿಯಂತಿವೆ.

ಕೇವಲ ವಸ್ತುಸಂಗ್ರಹಾಲಯವಲ್ಲ, ಕಲಿಕಾ ಕೇಂದ್ರ

ಹಸ್ತಶಿಲ್ಪ ಪರಂಪರೆ ಗ್ರಾಮ ಪರಂಪರೆ ಸಂರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಶೈಕ್ಷಣಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯ ಪ್ರವಾಸಿ ಆಕರ್ಷಣೆಗಿಂತ ಭಿನ್ನವಾಗಿ, ಭಾರತದ ಕಲಾತ್ಮಕ ಮತ್ತು ವಾಸ್ತುಶಿಲ್ಪ ಸಂಪ್ರದಾಯಗಳಲ್ಲಿ ಆಸಕ್ತಿಯಿರುವವರಿಗೆ ಇದು ತಲ್ಲೀನಗೊಳಿಸುವ, ಜ್ಞಾನದಾಯಕ ಅನುಭವ ನೀಡುತ್ತದೆ.

ಪ್ರವಾಸಿಗರಿಗೆ ಮಾಹಿತಿ

  • ವಿಳಾಸ: ಹಸ್ತಶಿಲ್ಪ ಪರಂಪರೆ ಗ್ರಾಮ ವಸ್ತುಸಂಗ್ರಹಾಲಯ, ಹೋಟೆಲ್ ಲೇಕ್ ವ್ಯೂ ಎದುರು, ಅಲೆವೂರು-ಮಣಿಪಾಲ ರಸ್ತೆ, ಕ್ರೈಸ್ಟ್ ಚರ್ಚ್ ಸಮೀಪ, ಮಣಿಪಾಲ, ಕರ್ನಾಟಕ 576104.
  • ಸಂಪರ್ಕ: 0820 2574577
  • ಸಮಯ: ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಸೋಮವಾರ ಮತ್ತು ಸಾರ್ವಜನಿಕ ರಜಾದಿನಗಳಂದು ಮುಚ್ಚಿರುತ್ತದೆ.
  • ಟಿಕೆಟ್ ದರ: ವಯಸ್ಕರಿಗೆ ₹300 ಮತ್ತು 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ₹150.
  • ಕಲೆ ಮತ್ತು ಸಂಸ್ಕೃತಿ ಕುರಿತ ತಲ್ಲೀನಗೊಳಿಸುವ ಅನುಭವ. ಕಾರ್ಯಕ್ರಮಗಳು, ವೇಳಾಪಟ್ಟಿ ಮತ್ತು ದರಗಳಿಗಾಗಿ heritagevillagemanipal.org ನೋಡಿ.

ಏಕೆ ಭೇಟಿ ನೀಡಬೇಕು?

ಹಸ್ತಶಿಲ್ಪ ಪರಂಪರೆ ಗ್ರಾಮ ಕೇವಲ ವಸ್ತುಸಂಗ್ರಹಾಲಯವಲ್ಲ, ಗತಕಾಲಕ್ಕೆ ಮರಳುವ ಪಯಣ. ಇಲ್ಲಿ ಪ್ರವಾಸಿಗರು:

  • ಭಾರತದ ಪರಂಪರೆ ರಚನೆಗಳ ಅದ್ಭುತ ಕುಶಲಕಲೆಯನ್ನು ಕಣ್ತುಂಬಿಕೊಳ್ಳಬಹುದು.
  • ಅಪರೂಪದ ಕಲಾಕೃತಿಗಳು, ಜವಳಿ ಮತ್ತು ಬುಡಕಟ್ಟು ಕಲೆಯ ಶ್ರೀಮಂತ ಸಂಗ್ರಹವನ್ನು ಅನ್ವೇಷಿಸಬಹುದು.
  • ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಸಮಕಾಲೀನ ಕಾಲದಲ್ಲಿ ಅದರ ಪ್ರಸ್ತುತತೆಯ ಬಗ್ಗೆ ಅರಿಯಬಹುದು.

ನೀವು ಇತಿಹಾಸ ಪ್ರಿಯರಾಗಿರಲಿ, ಶಿಕ್ಷಣ ತಜ್ಞರಾಗಿರಲಿ ಅಥವಾ ಕುತೂಹಲಿ ಪ್ರವಾಸಿಗರಾಗಿರಲಿ, ಹಸ್ತಶಿಲ್ಪ ಪರಂಪರೆ ಗ್ರಾಮ ಆಳವಾದ ಮತ್ತು ಸಮೃದ್ಧ ಅನುಭವ ನೀಡುತ್ತದೆ.

ಪರಂಪರೆ ಮತ್ತು ದೇವಾಲಯಗಳು ವಿಭಾಗದಲ್ಲಿ ಇನ್ನಷ್ಟು