ಪ್ರಕೃತಿ ಮತ್ತು ವನ್ಯಜೀವಿ
ಕ್ಷಿತಿಜ ನೇಸರಧಾಮ, ಒತ್ತಿನೆಣೆ
ಒತ್ತಿನೆಣೆಯ ಪ್ರಶಾಂತ ಪರಿಸರ ವಿಹಾರ ತಾಣ
ಅರಬ್ಬೀ ಸಮುದ್ರಕ್ಕೆ ಮುಖಮಾಡಿರುವ ರಮಣೀಯ ವಿಹಾರ ತಾಣ
ಪ್ರಶಾಂತ ಒತ್ತಿನೆಣೆ ಗ್ರಾಮದಲ್ಲಿ ನೆಲೆಸಿರುವ ಕ್ಷಿತಿಜ ನೇಸರಧಾಮ, ಉಡುಪಿಯಿಂದ 65 ಕಿ.ಮೀ ಮತ್ತು ಬೈಂದೂರಿನಿಂದ 6 ಕಿ.ಮೀ ದೂರದಲ್ಲಿರುವ ರಮಣೀಯ ವೀಕ್ಷಣಾ ತಾಣ. ಅರಬ್ಬೀ ಸಮುದ್ರ ಮತ್ತು ಹಸಿರು ಹೊದ್ದ ಪಶ್ಚಿಮ ಘಟ್ಟಗಳ ಮನಮೋಹಕ ನೋಟಗಳಿಗೆ ಹೆಸರಾದ ಈ ಪ್ರಶಾಂತ ತಾಣ, ಪ್ರಕೃತಿಪ್ರಿಯರು, ಛಾಯಾಗ್ರಾಹಕರು ಮತ್ತು ನೆಮ್ಮದಿ ಅರಸುವವರಿಗೆ ಆದರ್ಶ ಸ್ಥಳ.
**ಪ್ರಮುಖ ಆಕರ್ಷಣೆಗಳು
- ಅದ್ಭುತ ಸೂರ್ಯಾಸ್ತ:
ಸೂರ್ಯನ ಸುವರ್ಣ ಕಿರಣಗಳು ಸಮುದ್ರದ ವಿಶಾಲ ಹರವನ್ನು ಸಂಧಿಸಿ ಮರೆಯಲಾಗದ ದೃಶ್ಯಾವಳಿ ಸೃಷ್ಟಿಸುವ ಮನಮೋಹಕ ಸೂರ್ಯಾಸ್ತಕ್ಕೆ ಕ್ಷಿತಿಜ ನೇಸರಧಾಮ ಪ್ರಸಿದ್ಧ. - ವಿಹಂಗಮ ನೋಟಗಳು:
ಸೌಪರ್ಣಿಕಾ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮವೆಂಬ ಅಪರೂಪದ ನಿಸರ್ಗ ದೃಶ್ಯವನ್ನು ವೀಕ್ಷಿಸಲು ಈ ತಾಣ ಅನುಕೂಲಕರ ಸ್ಥಳ ಒದಗಿಸುತ್ತದೆ. - ಹಚ್ಚಹಸುರು:
ಗಾಳಿಮರ ಮತ್ತು ತೆಂಗಿನ ಮರಗಳಿಂದ ಆವೃತವಾದ ಈ ಪ್ರದೇಶ, ಉಲ್ಲಾಸದಾಯಕ ಪರಿಸರ ಹಾಗೂ ನಗರ ಜೀವನದ ಜಂಜಾಟದಿಂದ ಮನಸ್ಸಿಗೆ ಮುದ ನೀಡುವ ವಿರಾಮ ಒದಗಿಸುತ್ತದೆ. - ಸಮೀಪದ ಆಕರ್ಷಣೆಗಳು:
- ಒತ್ತಿನೆಣೆ ಕಡಲತೀರ: ವೀಕ್ಷಣಾ ತಾಣದ ಕೆಳಗೇ ಇರುವ ಏಕಾಂತ ಮತ್ತು ನಿರ್ಮಲ ಕಡಲತೀರ; ನಿಧಾನ ನಡಿಗೆಗೆ ಹೇಳಿಮಾಡಿಸಿದಂತಿದೆ.
- ಸೋಮೇಶ್ವರ ದೇವಸ್ಥಾನ: ಸಮೀಪದಲ್ಲಿರುವ, ಶಿವನಿಗೆ ಸಮರ್ಪಿತವಾದ ಈ ಪ್ರಾಚೀನ ದೇವಾಲಯ ಭೇಟಿಗೆ ಆಧ್ಯಾತ್ಮಿಕ ಆಯಾಮ ನೀಡುತ್ತದೆ.
**ಸಂದರ್ಶಕರ ಅನುಭವ
- ವಿಶ್ರಾಂತಿ ಮತ್ತು ನವಚೈತನ್ಯ:
ಶಾಂತ ವಾತಾವರಣ ಮತ್ತು ರಮಣೀಯ ಸೌಂದರ್ಯ ಕ್ಷಿತಿಜ ನೇಸರಧಾಮವನ್ನು ಪಿಕ್‌ನಿಕ್ ಹಾಗೂ ನಿಸರ್ಗದ ನಡುವೆ ವಿಶ್ರಾಂತಿಗೆ ಅತ್ಯುತ್ತಮ ತಾಣವಾಗಿಸಿವೆ. - ವನ್ಯಜೀವಿ ಮತ್ತು ಪಕ್ಷಿ ವೀಕ್ಷಣೆ:
ಸುತ್ತಲಿನ ಶ್ರೀಮಂತ ಜೀವವೈವಿಧ್ಯ ಪಕ್ಷಿ ಉತ್ಸಾಹಿಗಳು ಮತ್ತು ಪ್ರಕೃತಿಪ್ರಿಯರನ್ನು ಸೆಳೆಯುತ್ತದೆ. ಭೇಟಿಯ ವೇಳೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಸಂಪತ್ತಿನ ಮೇಲೆ ಕಣ್ಣಿಡಿ.
**ಸಾಂಸ್ಕೃತಿಕ ಮತ್ತು ಪರಿಸರ ಮಹತ್ವ
- ಪೌರಾಣಿಕ ಮಹತ್ವ:
ಈ ತಾಣದ ಸಮೀಪ ಹರಿಯುವ ಸೌಪರ್ಣಿಕಾ ನದಿ ಪವಿತ್ರ ಮೂಲ ಹೊಂದಿದೆ ಎಂದು ನಂಬಲಾಗಿದ್ದು, ಸ್ಥಳೀಯ ಐತಿಹ್ಯಗಳಲ್ಲಿ ಇದರ ಉಲ್ಲೇಖವಿದೆ. - ಪರಿಸರ ಸಂರಕ್ಷಣೆ:
ಇಲ್ಲಿನ ಪ್ರಶಾಂತ ಪರಿಸರ ಕರಾವಳಿ ಮತ್ತು ನದಿತೀರದ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವ ಮಹತ್ವವನ್ನು ಎತ್ತಿತೋರಿಸುತ್ತದೆ.
**ಸಂದರ್ಶಕರ ಮಾಹಿತಿ
- ದೂರ:
- ಉಡುಪಿಯಿಂದ 65 ಕಿ.ಮೀ
- ಬೈಂದೂರಿನಿಂದ 6 ಕಿ.ಮೀ
- ಭೇಟಿಗೆ ಸೂಕ್ತ ಸಮಯ:
- ಅಕ್ಟೋಬರ್‌ನಿಂದ ಮಾರ್ಚ್: ಹವಾಮಾನ ಹಿತಕರವಾಗಿದ್ದು, ಸೂರ್ಯಾಸ್ತ ವೀಕ್ಷಣೆಗೆ ಆಗಸ ಶುಭ್ರವಾಗಿರುತ್ತದೆ.
- ಸಮಯ:
ದಿನವಿಡೀ ತೆರೆದಿರುತ್ತದೆ. ಅತ್ಯುತ್ತಮ ಅನುಭವಕ್ಕಾಗಿ ಮುಂಜಾನೆ ಅಥವಾ ಸಂಜೆಯ ವೇಳೆ ಭೇಟಿ ನೀಡುವುದು ಸೂಕ್ತ.
**ಸಂದರ್ಶಕರಿಗೆ ಸಲಹೆಗಳು
- ಅಗತ್ಯ ವಸ್ತುಗಳನ್ನು ಕೊಂಡೊಯ್ಯಿರಿ: ನೀರು, ತಿಂಡಿ ಮತ್ತು ಅದ್ಭುತ ನೋಟಗಳನ್ನು ಸೆರೆಹಿಡಿಯಲು ಕ್ಯಾಮೆರಾ ಕೊಂಡೊಯ್ಯಿರಿ.
- ಆರಾಮದಾಯಕ ಪಾದರಕ್ಷೆ ಧರಿಸಿ: ವೀಕ್ಷಣಾ ತಾಣಕ್ಕೆ ಸಾಗುವ ಹಾದಿಯಲ್ಲಿ ಅಸಮ ನೆಲದಲ್ಲಿ ಸ್ವಲ್ಪ ನಡೆಯಬೇಕಾಗಬಹುದು.
- ಪ್ರಕೃತಿಯನ್ನು ಗೌರವಿಸಿ: ಕಸ ಹಾಕದೆ, ಪ್ರದೇಶದ ನಿರ್ಮಲ ಸೌಂದರ್ಯವನ್ನು ಕಾಪಾಡಲು ಕೈಜೋಡಿಸಿ.
**ಸಾರಾಂಶ
ಕ್ಷಿತಿಜ ನೇಸರಧಾಮ, ಒತ್ತಿನೆಣೆ, ಪ್ರಶಾಂತತೆ ಮತ್ತು ರಮಣೀಯ ವೈಭವವನ್ನು ಬಯಸುವವರಿಗೆ ಸ್ವರ್ಗ. ಮನಸೆಳೆಯುವ ಸೂರ್ಯಾಸ್ತ, ವಿಹಂಗಮ ಭೂದೃಶ್ಯಗಳು ಮತ್ತು ಪ್ರಶಾಂತ ಪರಿಸರದೊಂದಿಗೆ, ಕರ್ನಾಟಕದ ಕರಾವಳಿ ವಿಸ್ಮಯಗಳನ್ನು ಅನ್ವೇಷಿಸುವ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ತಾಣ ಇದು.



