ಪ್ರಕೃತಿ ಮತ್ತು ವನ್ಯಜೀವಿ

ಮಣಿಪಾಲ ಎಂಡ್ ಪಾಯಿಂಟ್

ಮಣಿಪಾಲ ಎಂಡ್ ಪಾಯಿಂಟ್‌ನಲ್ಲಿ ನಿಸರ್ಗ ಸೌಂದರ್ಯದ ಮನಮೋಹಕ ನೋಟ

  • ಮಣಿಪಾಲ ಎಂಡ್ ಪಾಯಿಂಟ್
  • ಮಣಿಪಾಲ ಎಂಡ್ ಪಾಯಿಂಟ್
ಮಣಿಪಾಲ ಎಂಡ್ ಪಾಯಿಂಟ್‌ನಲ್ಲಿ ವಿಹಂಗಮ ನೋಟಗಳೊಂದಿಗೆ ರಮಣೀಯ ವಿಹಾರ

ಮಣಿಪಾಲ ಎಂಡ್ ಪಾಯಿಂಟ್‌ನಲ್ಲಿ ನಿಸರ್ಗ ಸೌಂದರ್ಯದ ಮನಮೋಹಕ ನೋಟ

ಉಡುಪಿಯಿಂದ ಕೇವಲ 7.1 ಕಿ.ಮೀ ಮತ್ತು ಮಣಿಪಾಲದಿಂದ 2.7 ಕಿ.ಮೀ ದೂರದಲ್ಲಿರುವ ಮಣಿಪಾಲ ಎಂಡ್ ಪಾಯಿಂಟ್, ಪ್ರಕೃತಿ ಮತ್ತು ಮನರಂಜನೆಯನ್ನು ಸುಂದರವಾಗಿ ಬೆಸೆಯುವ ಪ್ರಶಾಂತ ತಾಣ. ಈ ರಮಣೀಯ ಸ್ಥಳದಿಂದ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಅದ್ಭುತ ನೋಟ ಲಭ್ಯವಿದ್ದು, ಸ್ವರ್ಣಾ ನದಿಯ ದಡ ವಿಶ್ರಾಂತಿಗೆ ಹೇಳಿಮಾಡಿಸಿದಂತಿದೆ. ಹಚ್ಚಹಸುರಿನ ಉದ್ಯಾನಗಳು, ಕ್ರೀಡಾ ಸೌಲಭ್ಯಗಳು ಮತ್ತು ಸಾಟಿಯಿಲ್ಲದ ಛಾಯಾಗ್ರಹಣ ಅವಕಾಶಗಳೊಂದಿಗೆ, ನಿಸರ್ಗದ ಮಡಿಲಲ್ಲಿ ನೆಮ್ಮದಿ ಮತ್ತು ಸ್ಫೂರ್ತಿಯನ್ನು ಅರಸುವ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ತಾಣ ಮಣಿಪಾಲ ಎಂಡ್ ಪಾಯಿಂಟ್.

ಇಲ್ಲಿ ಏನೇನು ನೋಡಬಹುದು?

  • ಮನಮೋಹಕ ಭೂದೃಶ್ಯಗಳು: ಹಸಿರು ಹೊದ್ದ ಪರಿಸರ, ಏರಿಳಿತದ ಬೆಟ್ಟಗಳು ಮತ್ತು ಹೊಳೆಯುವ ಜಲರಾಶಿಯ ವಿಶಾಲ ನೋಟಗಳನ್ನು ಸವಿಯಿರಿ; ಪ್ರಕೃತಿಪ್ರಿಯರು ಮತ್ತು ಛಾಯಾಗ್ರಾಹಕರಿಗೆ ಇದು ಹೇಳಿಮಾಡಿಸಿದ ತಾಣ.
  • ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳು: ಆಗಸ ಮನಮೋಹಕ ಬಣ್ಣಗಳಿಗೆ ಬದಲಾಗುವ ಬೆರಗಿನ ಕ್ಷಣಗಳನ್ನು ಕಣ್ತುಂಬಿಕೊಳ್ಳಿ.
  • ವಿರಾಮದ ತಾಣಗಳು:
    • ಉದ್ಯಾನಗಳು: ಮನಸ್ಸಿಗೆ ಮುದ ನೀಡುವ, ಅಚ್ಚುಕಟ್ಟಾಗಿ ನಿರ್ವಹಿಸಲಾದ ಹಸಿರು ಹುಲ್ಲುಹಾಸುಗಳಲ್ಲಿ ವಿಹರಿಸಿ.
    • ಕ್ರೀಡಾ ಸೌಲಭ್ಯಗಳು: ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವ ಆಧುನಿಕ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ರೀಡಾಂಗಣಗಳು ಇಲ್ಲಿವೆ.

ಮನಸೆಳೆಯುವ ನೋಟಗಳು

  • ಪಶ್ಚಿಮಕ್ಕೆ: ನಿಸರ್ಗ ಸೌಂದರ್ಯದ ಅದ್ಭುತ ದೃಶ್ಯವಾದ ಅರಬ್ಬೀ ಸಮುದ್ರದ ವಿಶಾಲ ಹರವನ್ನು ವೀಕ್ಷಿಸಿ.
  • ಪೂರ್ವಕ್ಕೆ: ಹಚ್ಚಹಸುರು ಮತ್ತು ಏರಿಳಿತದ ಬೆಟ್ಟಗಳ ಅದ್ಭುತ ವೈದೃಶ್ಯ ನೀಡುವ ಪಶ್ಚಿಮ ಘಟ್ಟಗಳ ಭವ್ಯತೆಗೆ ಬೆರಗಾಗಿ.
  • ಸ್ವರ್ಣಾ ನದಿ: ಸ್ವರ್ಣಾ ನದಿಯ ಶಾಂತ ಜಲರಾಶಿ ಈ ತಾಣದ ಸೊಬಗನ್ನು ಹೆಚ್ಚಿಸಿ, ನೆಮ್ಮದಿಯ ಚಿಂತನೆಗೆ ಸೂಕ್ತ ಸ್ಥಳವಾಗಿಸುತ್ತದೆ.

ಸೂರ್ಯೋದಯವಿರಲಿ ಅಥವಾ ಸೂರ್ಯಾಸ್ತವಿರಲಿ, ಮಣಿಪಾಲ ಎಂಡ್ ಪಾಯಿಂಟ್‌ನ ವಿಹಂಗಮ ನೋಟಗಳು ನಿಜಕ್ಕೂ ಮನಮೋಹಕ.

ವಿರಾಮ ಮತ್ತು ಕ್ರೀಡೆಯ ಕೇಂದ್ರ

  • ಹಸಿರು ಉದ್ಯಾನಗಳು: ನಿಸರ್ಗದ ನಡುವೆ ನಿಧಾನ ನಡಿಗೆ ಅಥವಾ ವಿಶ್ರಾಂತಿಯ ಪಿಕ್‌ನಿಕ್‌ಗೆ ಸೂಕ್ತ.
  • ಕ್ರೀಡಾ ಸೌಲಭ್ಯಗಳು: ಸುಸಜ್ಜಿತ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ರೀಡಾಂಗಣಗಳನ್ನು ಹೊಂದಿರುವ ಈ ಪ್ರದೇಶ ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸುತ್ತದೆ.

ಛಾಯಾಗ್ರಾಹಕರ ಸ್ವರ್ಗ

ಮಣಿಪಾಲ ಎಂಡ್ ಪಾಯಿಂಟ್‌ನ ರಮಣೀಯ ಭೂದೃಶ್ಯಗಳು ಮತ್ತು ಹಚ್ಚಹಸುರು ಛಾಯಾಗ್ರಾಹಕರಿಗೆ ಕನಸಿನಂತಹ ಹಿನ್ನೆಲೆ ಒದಗಿಸುತ್ತವೆ. ಬೆಳಕು-ನೆರಳಿನ ಆಟ, ಶಾಂತ ನದಿದಡ ಅಥವಾ ಮುಸ್ಸಂಜೆಯಲ್ಲಿ ಆಗಸದ ನಾಟಕೀಯ ಬಣ್ಣಗಳನ್ನು ಸೆರೆಹಿಡಿಯಿರಿ.

ಏಕೆ ಭೇಟಿ ನೀಡಬೇಕು?

  • ನಿಸರ್ಗ ಸೌಂದರ್ಯ: ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ವಿಶಿಷ್ಟ ಸಂಗಮ, ಜೊತೆಗೆ ಪ್ರಶಾಂತ ಸ್ವರ್ಣಾ ನದಿಯ ಮೆರುಗು.
  • ವಿರಾಮ ಮತ್ತು ವಿಶ್ರಾಂತಿ: ನೆಮ್ಮದಿಯ ಸಂಜೆಗಳು, ಪಿಕ್‌ನಿಕ್‌ಗಳು ಅಥವಾ ನಿಸರ್ಗದ ನಡುವೆ ಉಲ್ಲಾಸದಾಯಕ ನಡಿಗೆಗೆ ಸೂಕ್ತ.
  • ಛಾಯಾಗ್ರಹಣದ ಸ್ವರ್ಗ: ಮನಸೆಳೆಯುವ ಹಿನ್ನೆಲೆಯೊಂದಿಗೆ ರಮಣೀಯ ಕ್ಷಣಗಳನ್ನು ಸೆರೆಹಿಡಿಯಲು ನೆಚ್ಚಿನ ತಾಣ.
  • ಸಾಂಸ್ಕೃತಿಕ ಮಹತ್ವ: ತನ್ನ ಪ್ರಶಾಂತ ಪರಿಸರ ಮತ್ತು ಸಮುದಾಯದ ಸಮಾಗಮ ಸ್ಥಳವಾಗಿ ಈ ಪ್ರದೇಶ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಪ್ರಕೃತಿ ಮತ್ತು ವನ್ಯಜೀವಿ ವಿಭಾಗದಲ್ಲಿ ಇನ್ನಷ್ಟು