ಆಕರ್ಷಣೆಗಳು ಮತ್ತು ಹೆಗ್ಗುರುತುಗಳು
ನಾಣ್ಯ ವಸ್ತುಸಂಗ್ರಹಾಲಯ, ಉಡುಪಿ
ಭಾರತದ ನಾಣ್ಯಶಾಸ್ತ್ರ ಮತ್ತು ಬ್ಯಾಂಕಿಂಗ್ ಪರಂಪರೆಯ ಪಯಣ
ಕರೆನ್ಸಿಯ ಶ್ರೀಮಂತ ಇತಿಹಾಸದ ಅನ್ವೇಷಣೆ
ಭಾರತದ ನಾಣ್ಯಶಾಸ್ತ್ರ ಮತ್ತು ಬ್ಯಾಂಕಿಂಗ್ ಪರಂಪರೆಯ ಪಯಣ
ನಾಣ್ಯ ವಸ್ತುಸಂಗ್ರಹಾಲಯ ಎಂದೇ ಜನಪ್ರಿಯವಾಗಿರುವ ಕಾರ್ಪೊರೇಷನ್ ಬ್ಯಾಂಕ್ ಪರಂಪರೆ ವಸ್ತುಸಂಗ್ರಹಾಲಯ ಇತಿಹಾಸ ಪ್ರಿಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಪ್ಪದೇ ಭೇಟಿ ನೀಡಬೇಕಾದ ತಾಣ. ಕಾರ್ಪೊರೇಷನ್ ಬ್ಯಾಂಕ್ನ ಸ್ಥಾಪಕ ಹಾಜಿ ಅಬ್ದುಲ್ ಸಾಹೇಬರ ನಿವಾಸವಾಗಿದ್ದ 120 ವರ್ಷಗಳಷ್ಟು ಹಳೆಯ ಐತಿಹಾಸಿಕ ಕಟ್ಟಡದಲ್ಲಿರುವ ಈ ವಸ್ತುಸಂಗ್ರಹಾಲಯ ಭಾರತದ ಶ್ರೀಮಂತ ನಾಣ್ಯಶಾಸ್ತ್ರ ಮತ್ತು ಬ್ಯಾಂಕಿಂಗ್ ಇತಿಹಾಸದ ಆಕರ್ಷಕ ಪರಿಚಯ ನೀಡುತ್ತದೆ.
ಪ್ರದರ್ಶಿಕೆಗಳು:
- ನಾಣ್ಯ ಸಂಗ್ರಹ:
- ಮೌರ್ಯ, ಕುಷಾಣ, ಶಾತವಾಹನ ಮತ್ತು ಗುಪ್ತ ಸಾಮ್ರಾಜ್ಯಗಳಂತಹ ಪುರಾತನ ರಾಜವಂಶಗಳ, ಕ್ರಿ.ಪೂ. 400ರಷ್ಟು ಹಿಂದಿನ ಅಪರೂಪದ ನಾಣ್ಯಗಳು.
- ಅಕ್ಬರ್, ಜಹಾಂಗೀರ್ ಮತ್ತು ಷಹಜಹಾನ್ ಆಳ್ವಿಕೆ ಸೇರಿದಂತೆ ಮೊಘಲ್ ಯುಗದ ನಾಣ್ಯಗಳು.
- ಭಾರತದ ನಾಣ್ಯಗಳ ವಿಕಾಸವನ್ನು ಪ್ರದರ್ಶಿಸುವ, 40 ಲಕ್ಷ ರೂಪಾಯಿ ಮೌಲ್ಯದ 1,400ಕ್ಕೂ ಹೆಚ್ಚು ನಾಣ್ಯಗಳು.
- ಅಂಚೆ ಚೀಟಿ ಸಂಗ್ರಹ:
- ದೇಶದ ಅಂಚೆ ಚೀಟಿ ಇತಿಹಾಸವನ್ನು ದಾಖಲಿಸುವ ವಿಸ್ತಾರವಾದ ಅಂಚೆ ಚೀಟಿಗಳ ಸಂಗ್ರಹ.
- ಬ್ಯಾಂಕಿಂಗ್ ಪರಂಪರೆ:
- 1906ರಲ್ಲಿ ಕಾರ್ಪೊರೇಷನ್ ಬ್ಯಾಂಕ್ ಸ್ಥಾಪನೆಯಾದಂದಿನಿಂದ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸವನ್ನು ಬಿಂಬಿಸುವ ಪ್ರದರ್ಶಿಕೆಗಳು.
ಪ್ರಮುಖ ಆಕರ್ಷಣೆಗಳು:
- ಈ ಕಟ್ಟಡದಲ್ಲೇ ಕಾರ್ಪೊರೇಷನ್ ಬ್ಯಾಂಕ್ನ ಮೊದಲ ಶಾಖೆ ಆರಂಭವಾಗಿತ್ತು; ಇದು ಕಟ್ಟಡದ ಐತಿಹಾಸಿಕ ಮಹತ್ವವನ್ನು ಹೆಚ್ಚಿಸುತ್ತದೆ.
- ಭಾರತದ ಸಾಂಸ್ಕೃತಿಕ ಮತ್ತು ಆರ್ಥಿಕ ಇತಿಹಾಸದ ಒಳನೋಟ ನೀಡುವ ನಾಣ್ಯಶಾಸ್ತ್ರೀಯ ವಸ್ತುಗಳ ನಿಧಿ.
ಪ್ರವಾಸಿಗರಿಗೆ ಮಾಹಿತಿ:
- ಸಮಯ: ಪ್ರತಿದಿನ ಬೆಳಿಗ್ಗೆ 10:00ರಿಂದ ಸಂಜೆ 5:00ರವರೆಗೆ ತೆರೆದಿರುತ್ತದೆ (ಬ್ಯಾಂಕ್ ರಜಾದಿನಗಳಂದು ಮುಚ್ಚಿರುತ್ತದೆ).
- ಪ್ರವೇಶ: ಉಚಿತ
- ವಿಳಾಸ: ಉಡುಪಿ ನಗರ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ಪ್ರವಾಸಿಗರು ಸುಲಭವಾಗಿ ತಲುಪಬಹುದು.
ಅನುಭವ:
ಉಡುಪಿಯ ನಾಣ್ಯ ವಸ್ತುಸಂಗ್ರಹಾಲಯ ಕೇವಲ ಐತಿಹಾಸಿಕ ವಸ್ತುಗಳ ಭಂಡಾರವಲ್ಲ, ಪ್ರವಾಸಿಗರು ಈ ಪ್ರದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಗತದೊಂದಿಗೆ ಬೆಸೆದುಕೊಳ್ಳುವ ಸ್ಥಳವೂ ಹೌದು. ಅಪರೂಪದ ನಾಣ್ಯಗಳಿಂದ ಹಿಡಿದು ಒಳನೋಟ ನೀಡುವ ಬ್ಯಾಂಕಿಂಗ್ ಪ್ರದರ್ಶಿಕೆಗಳವರೆಗೆ, ಈ ವಸ್ತುಸಂಗ್ರಹಾಲಯ ಎಲ್ಲ ವಯೋಮಾನದವರಿಗೂ ವಿಶಿಷ್ಟ ಶೈಕ್ಷಣಿಕ ಅನುಭವ ನೀಡುತ್ತದೆ.





