ಆಕರ್ಷಣೆಗಳು ಮತ್ತು ಹೆಗ್ಗುರುತುಗಳು
ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್
ಕೋಟ ಶಿವರಾಮ ಕಾರಂತ ಪಾರ್ಕ್ನಲ್ಲಿ ಪರಂಪರೆ ಮತ್ತು ಮನರಂಜನೆಯ ರೋಮಾಂಚಕ ಅನುಭವ
ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಸಂಸ್ಕೃತಿ, ಪ್ರಕೃತಿ ಮತ್ತು ಸಾಹಸದ ಸುಂದರ ಸಂಗಮ
ಕೋಟ ಶಿವರಾಮ ಕಾರಂತ ಪಾರ್ಕ್ನಲ್ಲಿ ಪರಂಪರೆ ಮತ್ತು ಮನರಂಜನೆಯ ರೋಮಾಂಚಕ ಅನುಭವ
ಉಡುಪಿಯಿಂದ 25 ಕಿ.ಮೀ ದೂರದಲ್ಲಿರುವ ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್, ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರಿಗೆ ಸಲ್ಲಿಸಿದ ಸಮರ್ಪಕ ಗೌರವ. 2011ರಲ್ಲಿ ಸ್ಥಾಪನೆಗೊಂಡ ಈ ಸಾಂಸ್ಕೃತಿಕ ತಾಣದಲ್ಲಿ ಶಿಲ್ಪಗಳು, ಗ್ರಂಥಾಲಯ, ಕಲಾ ಗ್ಯಾಲರಿ ಮತ್ತು ಸಭಾಂಗಣಗಳಿದ್ದು, ಇವು ಕಾರಂತರ ಪರಂಪರೆಯನ್ನು ಜೀವಂತವಾಗಿರಿಸಿವೆ. ಸುಂದರ ಉದ್ಯಾನಗಳು ಮತ್ತು ಆಕರ್ಷಕ ಪ್ರದರ್ಶನಗಳೊಂದಿಗೆ, ಕರ್ನಾಟಕದ ಅತ್ಯಂತ ಪ್ರೀತಿಪಾತ್ರ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕಾರಂತರ ಅಪಾರ ಕೊಡುಗೆಯನ್ನು ಸಂಭ್ರಮಿಸುವ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೇಂದ್ರವಾಗಿ ಈ ಉದ್ಯಾನ ಕಾರ್ಯನಿರ್ವಹಿಸುತ್ತದೆ.****
ಉದ್ಯಾನದ ಪ್ರಮುಖ ಆಕರ್ಷಣೆಗಳು
- ಶಿಲ್ಪಗಳು ಮತ್ತು ಪ್ರತಿಮೆಗಳು:
- ಡಾ. ಶಿವರಾಮ ಕಾರಂತರ ಕಂಚಿನ ಪ್ರತಿಮೆ ಉದ್ಯಾನದಲ್ಲಿ ಎದ್ದುಕಾಣುವಂತೆ ನಿಂತಿದೆ.
- ಅವರ ಕಾದಂಬರಿಗಳ ಪಾತ್ರಗಳ ಶಿಲ್ಪಗಳು ಅವರ ಕಥೆಗಳಿಗೆ ಜೀವ ತುಂಬುತ್ತವೆ.
- ಗ್ರಾಮೀಣ ಬದುಕಿನೊಂದಿಗಿನ ಅವರ ನಂಟನ್ನು ಸಂಕೇತಿಸುವ ಅವರ ಎತ್ತಿನ ಗಾಡಿಯ ನೈಜ ಗಾತ್ರದ ಪ್ರತಿಕೃತಿ.
- ಗ್ರಂಥಾಲಯ ಮತ್ತು ಕಲಾ ಗ್ಯಾಲರಿ:
- ಗ್ರಂಥಾಲಯದಲ್ಲಿ ಕಾರಂತರ ವೈಯಕ್ತಿಕ ಪುಸ್ತಕ ಸಂಗ್ರಹವಿದ್ದು, ಇದು ಸಾಹಿತ್ಯ ಕೃತಿಗಳ ಅಮೂಲ್ಯ ಭಂಡಾರವಾಗಿದೆ.
- ಕಲಾ ಗ್ಯಾಲರಿಯಲ್ಲಿ ಅವರ ಬದುಕು ಮತ್ತು ಬರಹಗಳಿಂದ ಪ್ರೇರಿತವಾದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
- ಸಾಂಸ್ಕೃತಿಕ ಕೇಂದ್ರ:
- ಸಭಾಂಗಣದಲ್ಲಿ ನಾಟಕ, ಸಂಗೀತ ಕಾರ್ಯಕ್ರಮಗಳು ಮತ್ತು ಸಂವಾದಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತವೆ.
- ಕಾರಂತರ ಜನ್ಮದಿನದ ವಾರ್ಷಿಕ ಆಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಪ್ರತಿಷ್ಠಿತ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತದೆ.
- ನಿಸರ್ಗ ಸೌಂದರ್ಯ:
- ಪ್ರಶಾಂತ ಮಧ್ಯದ ಕೊಳವನ್ನು ಹೊಂದಿರುವ ಸುಂದರವಾಗಿ ರೂಪಿಸಿದ ಉದ್ಯಾನ, ಸಂದರ್ಶಕರಿಗೆ ನೆಮ್ಮದಿಯ ವಿರಾಮ ನೀಡುತ್ತದೆ.
ಏಕೆ ಭೇಟಿ ನೀಡಬೇಕು?
- ಸಾಂಸ್ಕೃತಿಕ ಒಳನೋಟ: ಕರ್ನಾಟಕದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರ ಬದುಕು ಮತ್ತು ಪರಂಪರೆಯನ್ನು ಆಳವಾಗಿ ಅರಿಯಿರಿ.
- ಸಂವಾದಾತ್ಮಕ ಅನುಭವ: ಶಿಲ್ಪಗಳು ಮತ್ತು ಪ್ರದರ್ಶನಗಳು ಕಾರಂತರ ಕೃತಿಗಳೊಂದಿಗೆ ಬೆಸೆಯಲು ಆಸಕ್ತಿಕರ ಮಾರ್ಗ ಒದಗಿಸುತ್ತವೆ.
- ಕಾರ್ಯಕ್ರಮಗಳ ಸಂಭ್ರಮ: ಪ್ರದೇಶದ ಪರಂಪರೆಯನ್ನು ಸಂಭ್ರಮಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳಿ.
- ರಮಣೀಯ ತಾಣ: ನಿಧಾನ ನಡಿಗೆ ಮತ್ತು ಚಿಂತನೆಗೆ ಸೂಕ್ತವಾದ ಉದ್ಯಾನಗಳ ಪ್ರಶಾಂತ ಸೌಂದರ್ಯವನ್ನು ಸವಿಯಿರಿ.
ಸಂದರ್ಶಕರ ಮಾಹಿತಿ
- ಸಮಯ: ಪ್ರತಿದಿನ ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ.
- ತಲುಪುವ ಬಗೆ: ಉಡುಪಿ (25 ಕಿ.ಮೀ) ಮತ್ತು ಬ್ರಹ್ಮಾವರ (14 ಕಿ.ಮೀ) ಎರಡೂ ಕಡೆಯಿಂದ ಸುಲಭವಾಗಿ ತಲುಪಬಹುದು.





