ಸಾಹಸ ಮತ್ತು ಕಡಲತೀರ

ಬೆಂಗ್ರೆ ಕಡಲತೀರ

ಉಡುಪಿಯ ನಿಸರ್ಗ ರಮಣೀಯ ಸೌಂದರ್ಯದ ನಡುವೆ ಒಂದು ಪ್ರಶಾಂತ ತಾಣ

  • ಬೆಂಗ್ರೆ ಕಡಲತೀರ
  • ಬೆಂಗ್ರೆ ಕಡಲತೀರ
  • ಬೆಂಗ್ರೆ ಕಡಲತೀರ
ಉಡುಪಿಯಲ್ಲಿ ಮನಮೋಹಕ ಸೌಂದರ್ಯದ ಪ್ರಶಾಂತ ವಿಹಾರ ತಾಣ

ಪ್ರಕೃತಿ ಪ್ರಿಯರಿಗೆ ಅತ್ಯಂತ ಸೂಕ್ತವಾದ ಬೆಂಗ್ರೆ ಕಡಲತೀರದ ಪ್ರಶಾಂತ ಸೊಬಗನ್ನು ಅನುಭವಿಸಿ

ಉಡುಪಿಯಿಂದ ಕೇವಲ 17 ಕಿ.ಮೀ ಮತ್ತು ಸಂತೆಕಟ್ಟೆಯಿಂದ 11 ಕಿ.ಮೀ ದೂರದಲ್ಲಿರುವ ಬೆಂಗ್ರೆ ಕಡಲತೀರ (ಸಾಮಾನ್ಯವಾಗಿ ಕೋಡಿ ಬೆಂಗ್ರೆ ಎಂದು ಕರೆಯಲಾಗುತ್ತದೆ) ಒಂದು ಅಸಾಧಾರಣ ಕರಾವಳಿ ಅನುಭವ ನೀಡುತ್ತದೆ. ಇಲ್ಲಿ ಸೀತಾ ನದಿ ಮತ್ತು ಸುವರ್ಣಾ ನದಿ ಎಂಬ ಎರಡು ನದಿಗಳು ಒಂದಾಗಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ಈ ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಸೊಗಡು ಬೆಂಗ್ರೆ ಕಡಲತೀರವನ್ನು ಅನನ್ಯ ತಾಣವನ್ನಾಗಿಸಿವೆ.

ಬೆಂಗ್ರೆ ಕಡಲತೀರದ ವಿಶೇಷತೆ ಏನು?

  • ನೈಸರ್ಗಿಕ ಸಂಗಮ: ನದಿಗಳು ಸಮುದ್ರವನ್ನು ಸೇರುವ ದೃಶ್ಯ ಮನಮೋಹಕವಾಗಿದ್ದು, ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ.
  • ಕಿರಿದಾದ ಭೂಪ್ರದೇಶ: ಸುಮಾರು 50 ಮೀಟರ್ ಅಗಲದ ವಿಶಿಷ್ಟ ಭೂ ಭಾಗವು ಒಂದು ಬದಿಯಲ್ಲಿ ನದಿ, ಮತ್ತೊಂದು ಬದಿಯಲ್ಲಿ ಅರಬ್ಬೀ ಸಮುದ್ರ ಕಾಣುವ ಅಪರೂಪದ ದೃಶ್ಯ ಸಾಟಿಯಿಲ್ಲದ ಸೌಂದರ್ಯವನ್ನು ನೀಡುತ್ತದೆ.
  • ಸಾಂಪ್ರದಾಯಿಕ ಕರಾವಳಿ ಜೀವನ: ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಮನೆಗಳು, ಹೋಂಸ್ಟೇಗಳು ಮತ್ತು ದೋಣಿ ಮನೆಗಳು ಇದ್ದು, ಪ್ರವಾಸಿಗರಿಗೆ ಕರಾವಳಿ ಜೀವನದ ನೈಜ ಪರಿಚಯ ಮಾಡಿಕೊಡುತ್ತವೆ.
  • ಮೀನುಗಾರಿಕಾ ಬಂದರು: ಚಿಕ್ಕದಾದರೂ ಚಟುವಟಿಕೆಯಿಂದ ಕೂಡಿದ ಮೀನುಗಾರಿಕಾ ಬಂದರು ಸ್ಥಳೀಯ ಸಂಸ್ಕೃತಿ ಮತ್ತು ಚಟುವಟಿಕೆಗಳಿಗೆ ಮೆರಗು ನೀಡುತ್ತದೆ. ಛಾಯಾಗ್ರಹಣ ಮತ್ತು ಅನ್ವೇಷಣೆಗೆ ಇದು ಉತ್ತಮ ತಾಣ.
  • ದೋಣಿ/ಬಾರ್ಜ್ ಸವಾರಿ: ಕೋಡಿ ಬೆಂಗ್ರೆ ಮತ್ತು ಹಂಗಾರಕಟ್ಟೆಯನ್ನು ಸಂಪರ್ಕಿಸುವ ದೋಣಿ ಸೇವೆ ಇಲ್ಲಿನ ವಿಶಿಷ್ಟ ಆಕರ್ಷಣೆಯಾಗಿದ್ದು, ಜಲಮಾರ್ಗಗಳನ್ನು ಹತ್ತಿರದಿಂದ ಅನುಭವಿಸಲು ಅವಕಾಶ ನೀಡುತ್ತದೆ.

ಬೆಂಗ್ರೆ ಕಡಲತೀರದಲ್ಲಿ ಆನಂದಿಸಬಹುದಾದ ಚಟುವಟಿಕೆಗಳು

  • ವಿಹಾರ ಮತ್ತು ಛಾಯಾಗ್ರಹಣ: ಪ್ರಶಾಂತ ವಾತಾವರಣವು ನಿಧಾನವಾಗಿ ನಡೆದಾಡಲು ಮತ್ತು ನದಿ-ಸಮುದ್ರಗಳ ಸುಂದರ ದೃಶ್ಯಗಳನ್ನು ಸೆರೆಹಿಡಿಯಲು ಸೂಕ್ತವಾಗಿದೆ.
  • ಹೋಂಸ್ಟೇ ಅನುಭವ: ಸ್ಥಳೀಯ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಇಲ್ಲಿನ ಪ್ರಸಿದ್ಧ ಕರಾವಳಿ ಹೋಂಸ್ಟೇ ಒಂದರಲ್ಲಿ ತಂಗಿ.
  • ದೋಣಿವಿಹಾರ: ಬಾರ್ಜ್ ಅಥವಾ ದೋಣಿಯಲ್ಲಿ ಸಾಗಿ ಜಲಮಾರ್ಗಗಳನ್ನು ಅನ್ವೇಷಿಸಿ, ಸಂಗಮವನ್ನು ವಿಭಿನ್ನ ದೃಷ್ಟಿಕೋನದಿಂದ ವೀಕ್ಷಿಸಿ.
  • ಮೀನುಗಾರಿಕೆಯ ಪರಿಚಯ: ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಸ್ಥಳೀಯ ಮೀನುಗಾರಿಕಾ ಪದ್ಧತಿಗಳನ್ನು ಅರಿಯಿರಿ ಮತ್ತು ಸಮುದಾಯದೊಂದಿಗೆ ಬೆರೆಯಿರಿ.

ಬೆಂಗ್ರೆ ಕಡಲತೀರಕ್ಕೆ ಏಕೆ ಭೇಟಿ ನೀಡಬೇಕು?

  • ಅಪರೂಪದ ನೈಸರ್ಗಿಕ ವಿದ್ಯಮಾನ: ಎರಡು ನದಿಗಳು ಅರಬ್ಬೀ ಸಮುದ್ರವನ್ನು ಸೇರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಿ.
  • ಸಾಂಸ್ಕೃತಿಕ ಅನುಭವ: ಇಲ್ಲಿನ ಮನೆಗಳು, ಹೋಂಸ್ಟೇಗಳು ಮತ್ತು ಚಟುವಟಿಕೆಯ ಸ್ಥಳೀಯ ಸಮುದಾಯದ ಮೂಲಕ ಸಾಂಪ್ರದಾಯಿಕ ಕರಾವಳಿ ಜೀವನವನ್ನು ಅರಿಯಿರಿ.
  • ಶಾಂತಿಯುತ ವಿರಾಮ: ಪ್ರಶಾಂತ ವಾತಾವರಣ ಮತ್ತು ಸುಂದರ ಪರಿಸರ ವಿಶ್ರಾಂತಿಗೆ ಇದನ್ನು ಸೂಕ್ತ ತಾಣವನ್ನಾಗಿಸಿವೆ.

ಭೇಟಿ ನೀಡಲು ಸೂಕ್ತ ಸಮಯ

ಹವಾಮಾನ ಹಿತಕರವಾಗಿದ್ದು, ನದಿ ಮತ್ತು ಸಮುದ್ರಗಳು ಅತ್ಯಂತ ಸುಂದರವಾಗಿ ಕಾಣುವ ಅಕ್ಟೋಬರ್‌ನಿಂದ ಫೆಬ್ರವರಿ ತಿಂಗಳುಗಳಲ್ಲಿ ಬೆಂಗ್ರೆ ಕಡಲತೀರಕ್ಕೆ ಭೇಟಿ ನೀಡಿ.

ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಸೊಗಡು ಮತ್ತು ಕಡಲತೀರದ ನೆಮ್ಮದಿಯ ವಿಶಿಷ್ಟ ಸಮ್ಮಿಲನವನ್ನು ಬಯಸುವವರು ಬೆಂಗ್ರೆ ಕಡಲತೀರಕ್ಕೆ ತಪ್ಪದೇ ಭೇಟಿ ನೀಡಬೇಕು.

ಸಾಹಸ ಮತ್ತು ಕಡಲತೀರ ವಿಭಾಗದಲ್ಲಿ ಇನ್ನಷ್ಟು