ಕೋಡಿ ಕಡಲತೀರ
ಉತನ್ನ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾದ ಸುಂದರ ಕಡಲತೀರ.
ಪ್ರಕೃತಿ ಪ್ರಿಯರ ಸ್ವರ್ಗವಾದ ಕೋಡಿ ಕಡಲತೀರ ಮತ್ತು ಅದರ ಸುಂದರ ಸಮುದ್ರ ನಡಿಗೆ ಪಥದ ಸೊಬಗನ್ನು ಅನುಭವಿಸಿ
ಕುಂದಾಪುರ ಪಟ್ಟಣದ ಸಮೀಪದಲ್ಲಿರುವ ಕೋಡಿ ಕಡಲತೀರ ನೈಸರ್ಗಿಕ ಸೌಂದರ್ಯ ಮತ್ತು ವಿಶಿಷ್ಟ ಅನುಭವಗಳೆರಡನ್ನೂ ನೀಡುವ ಆಕರ್ಷಕ ತಾಣ. ಮೂರು ಕಡೆ ನೀರಿನಿಂದ ಆವೃತವಾಗಿರುವ ಈ ಸುಂದರ ಕಡಲತೀರವು ವಿಹಾರಕೂಟ, ಈಜು ಮತ್ತು ವಿಶ್ರಾಂತಿಗೆ ಹೇಳಿ ಮಾಡಿಸಿದ ಪ್ರಶಾಂತ ವಾತಾವರಣ ಹೊಂದಿದೆ. ಕನ್ನಡದಲ್ಲಿ "ಕೋಡಿ" ಎಂದರೆ "ತೀರ" ಎಂದರ್ಥ; ಈ ಹೆಸರೇ ಕಡಲತೀರದ ಕರಾವಳಿ ಸೊಬಗನ್ನು ಬಿಂಬಿಸುತ್ತದೆ.
ಕೋಡಿ ಸಮುದ್ರ ನಡಿಗೆ ಪಥ: ತಪ್ಪದೇ ಅನುಭವಿಸಬೇಕಾದ ತಾಣ
ಕೋಡಿ ಸಮುದ್ರ ನಡಿಗೆ ಪಥ ಕೋಡಿ ಕಡಲತೀರದಲ್ಲಿ ಅಲೆ ತಡೆಗೋಡೆಯ ಮೇಲೆ ನಿರ್ಮಿಸಲಾದ 1 ಕಿ.ಮೀ ಉದ್ದದ ಹಾದಿಯಾಗಿದ್ದು, ಸಮುದ್ರದ ಮೇಲೆ ನಡೆದಾಡುವ ಅನುಭವ ನೀಡುತ್ತದೆ. ಹಾದಿಯ ಎರಡೂ ಬದಿಗಳಲ್ಲಿರುವ ರಕ್ಷಣಾ ಗೋಡೆಗಳು ಅಲೆಗಳಿಂದ ರಕ್ಷಣೆ ನೀಡುತ್ತಾ ಸುರಕ್ಷಿತ ಹಾಗೂ ತಲ್ಲೀನಗೊಳಿಸುವ ಅನುಭವ ಒದಗಿಸುತ್ತವೆ. ಈ ಪಥದಿಂದ ಅರಬ್ಬೀ ಸಮುದ್ರದ ವಿಹಂಗಮ ನೋಟ ಲಭ್ಯವಿದ್ದು, ಛಾಯಾಗ್ರಹಣ, ನಿಧಾನ ನಡಿಗೆ ಮತ್ತು ತಾಜಾ ಕಡಲ ಗಾಳಿಯನ್ನು ಸವಿಯಲು ಇದು ಸೂಕ್ತ ಸ್ಥಳ.
ಕೋಡಿ ಕಡಲತೀರ ಮತ್ತು ಸಮುದ್ರ ನಡಿಗೆ ಪಥದ ಪ್ರಮುಖ ಆಕರ್ಷಣೆಗಳು
- ಮನಮೋಹಕ ವಾತಾವರಣ: ಮೂರು ಕಡೆ ನೀರಿನಿಂದ ಆವೃತವಾಗಿರುವ ಕೋಡಿ ಕಡಲತೀರವು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮತ್ತು ನೆಮ್ಮದಿಯ ಕ್ಷಣಗಳನ್ನು ಕಳೆಯಲು ಪ್ರಮುಖ ತಾಣ.
- ವಿಶಿಷ್ಟ ಸಮುದ್ರ ನಡಿಗೆ ಪಥ: ಸಮುದ್ರದೊಳಕ್ಕೆ ಚಾಚಿಕೊಂಡಿರುವ 1 ಕಿ.ಮೀ ಉದ್ದದ ಪಥವು ಮನಮೋಹಕ ನೋಟ ಮತ್ತು ಸಾಹಸದ ಅನುಭೂತಿಯೊಂದಿಗೆ ಅನನ್ಯ ಅನುಭವ ನೀಡುತ್ತದೆ.
- ಈಜು ಮತ್ತು ವಿಹಾರಕೂಟ: ಈಜಲು ಅನುಕೂಲಕರವಾದ ನೀರಿಗೆ ಹೆಸರಾದ ಈ ಕಡಲತೀರವು ಕುಟುಂಬ ಪ್ರವಾಸ ಅಥವಾ ಏಕಾಂತ ವಿರಾಮಕ್ಕೆ ಜನಪ್ರಿಯ ವಿಹಾರ ತಾಣ.
ಆನಂದಿಸಬಹುದಾದ ಚಟುವಟಿಕೆಗಳು
- ಸಮುದ್ರ ನಡಿಗೆ ಪಥದಲ್ಲಿ ವಿಹಾರ: ದಿಗಂತದ ಅಡೆತಡೆಯಿಲ್ಲದ ನೋಟದೊಂದಿಗೆ ಸಮುದ್ರದ ಮೇಲೆ ನಡೆಯುವ ರೋಮಾಂಚನವನ್ನು ಅನುಭವಿಸಿ.
- ಕಡಲತೀರದ ವಿಹಾರಕೂಟ: ಕಡಲತೀರದ ಸೌಂದರ್ಯ ಮತ್ತು ಮನಶ್ಶಾಂತಿ ನೀಡುವ ಅಲೆಗಳ ಸದ್ದನ್ನು ಸವಿಯುತ್ತಾ ಪ್ರೀತಿಪಾತ್ರರೊಂದಿಗೆ ದಿನ ಕಳೆಯಿರಿ.
- ಈಜು: ಇಲ್ಲಿನ ಆಕರ್ಷಕ ಜಲರಾಶಿಯು ಉಲ್ಲಾಸದಾಯಕ ಈಜಿಗೆ ಅತ್ಯಂತ ಸೂಕ್ತವಾಗಿದೆ.
- ಛಾಯಾಗ್ರಹಣ: ವಿಶೇಷವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ಸಮುದ್ರ ಮತ್ತು ನಡಿಗೆ ಪಥದ ಸೌಂದರ್ಯವನ್ನು ಸೆರೆಹಿಡಿಯಿರಿ.
ಭೇಟಿ ನೀಡಲು ಸೂಕ್ತ ಸಮಯ
ಹವಾಮಾನ ಹಿತಕರವಾಗಿದ್ದು ಹೊರಾಂಗಣ ಚಟುವಟಿಕೆಗಳಿಗೆ ಅನುಕೂಲಕರವಾಗಿರುವ ಅಕ್ಟೋಬರ್ನಿಂದ ಫೆಬ್ರವರಿ ತಿಂಗಳುಗಳು ಕೋಡಿ ಕಡಲತೀರ ಮತ್ತು ಸಮುದ್ರ ನಡಿಗೆ ಪಥಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ.
ಕೋಡಿ ಕಡಲತೀರ ಮತ್ತು ಸಮುದ್ರ ನಡಿಗೆ ಪಥ ಪ್ರಕೃತಿ ಪ್ರಿಯರು, ಸಾಹಸಾಕಾಂಕ್ಷಿಗಳು ಹಾಗೂ ಸಮುದ್ರ ತೀರದಲ್ಲಿ ನೆಮ್ಮದಿಯ ವಿರಾಮ ಬಯಸುವವರಿಗೆ ಮರೆಯಲಾಗದ ಅನುಭವ ನೀಡುತ್ತದೆ.




